Monday 19 September 2011


ಮೊದಲ ಹೆಜ್ಜೆ...

ಬೆಳದಿಂಗಳು ಎಂಬ ಬ್ಲಾಗ್‌ ಪ್ರಾರಂಭಿಸಿ, ಸುಮಾರು ತಿಂಗಳುಗಳೇ ಕಳೆದು ಹೋಗಿವೆ... ಇದನ್ನು ಅಪ್‌ಡೇಟ್‌ ಮಾಡಲು ಸಮಯ ಅಭಾವದಿಂದ ಸಾಧ್ಯವಾಗಲಿಲ್ಲ... ದಿನನಿತ್ಯ ಪುರುಸೋತ್ತಿಲ್ಲ ಕೆಲಸಕಾರ್ಯಗಳು...
ದಯವಿಟ್ಟು ಎಲ್ಲರಲ್ಲಿ ಕ್ಷಮೆಯಿರಲಿ...


ಬೆಳದಿಂಗಳು ಎಂದರೆ ಆಕಾಶದಲ್ಲಿ ಹುಣ್ಣಿಮೆಯಲ್ಲಿ ಚಂದಿರನು ಕಾಣುವುದನ್ನು ಸಾಮಾನ್ಯವಾಗಿ ಎಲ್ಲರೂ ಬೆಳದಿಂಗಳು ಎಂದು ಭಾವಿಸಿ, ತಮ್ಮ ಮಕ್ಕಳಿಗೆ ಊಟ ನೀಡುವಾಗ, ಹಾಗೆಯೇ ಮಕ್ಕಳು ತುಂಬಾ ತೊಂದರೆ ಕೊಟ್ಟಾಗಲು ಇದೇ ಬೆಳದಿಂಗಳನ್ನು ತೋರಿಸಿ, ಸಮಾಧಾನ ಪಡಿಸುವುದು ಎಲ್ಲರಿಗೂ ತಿಳಿದ ವಿಚಾರ.
ಈ ಪ್ರಪಂಚದಲ್ಲಿ ಬೆಳದಿಂಗಳು ಎಂದರೆ ಇದಷ್ಟೇ ಮಾತ್ರವಲ್ಲದೆ, ಎಲ್ಲವೂ ಅಂದರೆ ದಿನನಿತ್ಯ ಎಲ್ಲರ ಜೀವನದಲ್ಲೂ ಬೆಳದಿಂಗಳು ಬರಲೇಬೇಕು. ಬಂದು ಹೋಗಲೇ ಬೇಕು... ಇಲ್ಲವಾದರೆ ಯಾವೊಬ್ಬ ವ್ಯಕ್ತಿಯೂ ತನ್ನ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ... ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಕೆಲಸಗಳಲ್ಲಿ ಅಥವಾ ಅವನ ದಿನನಿತ್ಯದ ಯಾವೊಂದು ಭಾಗದಲ್ಲಾದರೂ ಬೆಳದಿಂಗಳು ಬೇಕೇ ಬೇಕು... ಬೆಳದಿಂಗಳು ಅಂದರೆ ರಾತ್ರಿ ಆಕಾಶದಲ್ಲಿ ಮೂಡುವ ಬೆಳದಿಂಗಳು ಅಲ್ಲ ಮಾರಾಯ್ರೆ...

ಒಬ್ಬ ಹುಡುಗ ಒಂದು ಹುಡುಗಿಯ ಹಿಂದೆ ಸುತ್ತಿ ಸುತ್ತಿ ಸುಸ್ತಾಗಿ ಅವಳು ಸಿಗುವುದೇ ಇಲ್ಲ ಎಂದು ಬೇಸರಗೊಂಡು ದೇವದಾಸನಂತಾಗುವ ಸಂದರ್ಭದಲ್ಲಿ ಆ ಹುಡುಗಿ ಈತನಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆಂದು ತಿಳಿಸಿದಾಗ ಆತನಲ್ಲಾಗುವ ಆನಂದವೂ ಸಹ ಒಂದು ಬೆಳದಿಂಗಳು...

ಹೀಗೆ ದಿನನಿತ್ಯ ಎಲ್ಲರ ಜೀವನದಲ್ಲೂ ಬೆಳದಿಂಗಳು ಬಂದು ಹೋಗುತ್ತದೆ...

ಇನ್ನು ಮುಂದೆ ವಾರಕ್ಕೊಮ್ಮೆಯಾದರೂ ಬೆಳದಿಂಗಳು ಬ್ಲಾಗ್‌ನ್ನು ಅಪ್‌ಡೇಟ್‌ ಮಾಡುತ್ತೇನೆ...


ಇಂತಿ ನಿಮ್ಮ ಗೆಳೆಯ...